Translate in your Language

Sunday, August 3, 2014

ಯಶವಂತ ಚಿತ್ತಾಲರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಜನನ: ಆಗಸ್ಟ್ 3, 1928, ನಿಧನ: ಮಾರ್ಚ್ 22, 2014
ಕನ್ನಡದ ಪ್ರತಿಭಾನ್ವಿತ, ಸೃಜನಶೀಲ ಗದ್ಯ ಲೇಖಕರಾದ ಯಶವಂತ ಚಿತ್ತಾಲರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹನೇನಹಳ್ಳಿ. ತಂದೆ ವಿಠೋಬ, ತಾಯಿ ರುಕ್ಮಿಣಿ. (ಇವರ ಅಣ್ಣನೇ ಪ್ರಸಿದ್ಧ ಕವಿ ಗಂಗಾಧರ ಚಿತ್ತಾಲರು) ಪ್ರಾರಂಭಿಕ ವಿದ್ಯಾಭ್ಯಾಸ ಹನೇನಹಳ್ಳಿ, ಕುಮಟಾಗಳಲ್ಲಿ. ಉನ್ನತ ವಿದ್ಯಾಭ್ಯಾಸ ಧಾರವಾಡ ಮತ್ತು ಅಮೆರಿಕ. ೧೯೭೨ರಲ್ಲಿ ಅಮೆರಿಕದ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿ ರಾಸಾಯನಿಕ ತಂತ್ರಜ್ಞಾನದಲ್ಲಿ ಪಡೆದ ಸ್ನಾತಕೋತ್ತರ ಪದವಿ.

ಉದ್ಯೋಗಿಯಾಗಿ ಸೇರಿದ್ದು ಮುಂಬಯಿಯ ಬೇಕ್‌ಲೈಟ್ ಹೈಲ್ಯಾಮ್ ಲಿ. ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಪ್ಲಾಸ್ಟಿಕ್ ಅಂಡ್ ರಬ್ಬರ್ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಮುಂಬಯಿಯ ಇಂಡಿಯನ್ ಪ್ಲಾಸ್ಟಿಕ್ ಮತ್ತು ಅಮೆರಿಕದ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ನಡೆಸಿದ ಹಲವಾರು ಸಂಶೋಧನೆಗಳು.


ವೃತ್ತಿಯಿಂದ ರಾಸಾಯನಿಕ ತಂತ್ರಜ್ಞರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯ ಸೃಷ್ಟಿ. ಪಾಶ್ಚಾತ್ಯ ದೇಶಗಳ ಸಂಚಾರದಿಂದ ಅಲ್ಲಿಯ ಸಾಹಿತ್ಯ, ಸಂಸ್ಕೃತಿ, ಮೌಲ್ಯಗಳ ತೌಲನಿಕ ಚಿಂತನೆ ನಡೆಸಿ ಕನ್ನಡ ಸಾಹಿತ್ಯದಲ್ಲಿ ಕೃತಿ ರಚನೆ. ಮನಶಾಸ್ತ್ರ, ಜೀವವಿಜ್ಞಾನ, ಅರ್ಥಶಾಸ್ತ್ರ ಅಧ್ಯಯನಗಳಿಗೆ ತೆರೆದ ಮನಸ್ಸು. ಫ್ರಾಯ್ಡ್, ಯೂಂಗ್, ಮಾರ್ಕ್ಸ್, ಎರಿಕ್ ಫ್ರಾಮ್, ಡಾರ್ವಿನ್ ಮುಂತಾದ ಚಿಂತಕರ ವಿಚಾರಧಾರೆಯಲ್ಲಿ ಪಡೆದ ಪ್ರಾವೀಣ್ಯತೆ.

೧೯೪೯ರಲ್ಲಿ ಮೊದಲ ಕತೆ ಪ್ರಕಟಿತ. ಕಥಾಸಂಕಲನಗಳು-ಸಂದರ್ಶನ (೧೯೫೭), ಅಬೋಲಿನ-(೧೯೬೦) ; ಆಟ-(೧೯೬೯) ; ಆಯ್ದ ಕಥೆಗಳು-(೧೯೭೬) ; ಕಥೆಯಾದಳು ಹುಡುಗಿ-(೧೯೮೦) ; ಬೇನ್ಯಾ-(೧೯೮೨) ; ಸಿದ್ಧಾರ್ಥ ಮುಂತಾದುವು. ಕಾದಂಬರಿಗಳು-ಮೂರು ದಾರಿಗಳು (೧೯೬೪ರಲ್ಲಿ ಚಲನಚಿತ್ರವಾಗಿದೆ), ಶಿಕಾರಿ-(೧೯೭೯) ; ಛೇದ-(೧೯೮೫) ; ಪುರುಷೋತ್ತಮ-(೧೯೯೦) ; ವೃತ್ತಾಂತ ಪ್ರಮುಖ ಕಾದಂಬರಿಗಳು. ವಿಮರ್ಶೆ-ಸಾಹಿತ್ಯ, ಸೃಜನಶೀಲತೆ ಮತ್ತು ನಾನು ೧೯೮೧ರಲ್ಲಿ ಪ್ರಕಟಗೊಂಡ ಕೃತಿ.

ಅರಸಿ ಬಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ವಿಶೇಷ ಪುರಸ್ಕಾರ, ಉತ್ತರ ಕನ್ನಡ ಜಿಲ್ಲೆಯ ೪ನೇ ಸಮ್ಮೇಳನದ ಅಧ್ಯಕ್ಷತೆ. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಹಾರಾಷ್ಟ್ರ ಸರಕಾರದ ಗೌರವ, ಭಾರತ ಭಾಷಾ ಪರಿಷತ್ತಿನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಶ್ರೇಷ್ಠ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ, ಶ್ರೀಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಟಿ.ಎಂ.ಎ. ಫೌಂಡೇಶನ್ನಿನಿಂದ ಔಟ್ ಸ್ಟಾಂಡಿಂಗ್ ಕೊಂಕಣಿ ಅವಾರ್ಡ್ ಮುಂತಾದುವು.

No comments:

Post a Comment