Translate in your Language

Monday, May 30, 2016

ರವಿಚಂದ್ರನ್ ಅವರ 56ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು




ನಮ್ಮ ವಿ. ರವಿಚಂದ್ರನ್ ಹುಟ್ಟಿದ ಹಬ್ಬ.  ಅವರು ಹುಟ್ಟಿದ್ದು ಮೇ 30, 1961 ರಲ್ಲಿ.  ಹೆಸರಾಂತ ಚಲನಚಿತ್ರಗಳ ನಿರ್ಮಾಪಕ, ವಿತರಕರಾದ ಎನ್.  ವೀರಸ್ವಾಮಿ ಅವರ ಪುತ್ರ ರವಿಚಂದ್ರನ್.    ಪ್ರಾರಂಭದಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡುತ್ತಾ ತಾನು ಭಾಗವಹಿಸಿದ್ದ ಒಂದೊಂದು ಚಿತ್ರದಲ್ಲೂ ಇನಿತಿನಿತು ಕಲಿಯುತ್ತ ಬಂದ ಈ ಹುಡುಗ ‘ಗ್ರೀಸ್ 2’ ಎಂಬಂತಹ ಚಿತ್ರವನ್ನು ನೆನಪಿಸುವ ‘ಪ್ರೇಮಲೋಕ’ ಎಂಬ ಚಿತ್ರವನ್ನು ಮಾಡಿ ಮನೆಮಾತಾಗಿ ಬಿಟ್ಟರು.  ಆತನ ಯಶಸ್ಸಿನ ಹಾದಿ ‘ಅಂಜದ ಗಂಡು’, ‘ರಣಧೀರ’ ಮುಂತಾದ ಯಶಸ್ವೀ ಚಿತ್ರಗಳನ್ನು ತಂದಿತು.  ರವಿಚಂದ್ರನ್ ತಮಗೆ ಅಭಿಮಾನಿಗಳು ನೀಡಿರುವ ಬಿರುದಿನಂತೆ ಒಬ್ಬ ಮಹಾನ್ ‘ಕನಸುಗಾರ’. ಕ್ರೇಜಿ ಸ್ಟಾರ್

ಹಿರಿಯ ನಟರೊಂದಿಗೆ ರವಿಚಂದ್ರನ್
ರವಿಚಂದ್ರನ್ ಚಿತ್ರಗಳನ್ನು ನೋಡಿದಾಗಲೆಲ್ಲಾ ಏನೋ ಒಂದು ಅಪೂರ್ಣತೆಯಿದೆ ಎಂದು ಅನಿಸುವುದರ ಜೊತೆಗೆ ಇಲ್ಲೂ ಏನೋ ಹೊಸತು ಕಾಣುತ್ತಿದೆ, ಒಂದಷ್ಟು ವೈಭವೀಕರಣ ಇದೆ, ಅರ್ಥ ತಾತ್ಪರ್ಯಗಳ ಗೋಜಿಗೆ ಹೋಗದಿದ್ದರೆ ಒಂದಷ್ಟು ಗುನುಗೋಣ ಎನಿಸುವ ಹಾಡುಗಳಿವೆ, ನಮ್ಮ ಸೆನ್ಸಾರ್ ಮಂಡಳಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ಕೆಲವೊಮ್ಮೆ ಸಂದೇಹ ಉಕ್ಕಿಸುವ ಸನ್ನಿವೇಶಗಳಿವೆ ಇವೆಲ್ಲಾ ನೆನಪಾಗುತ್ತೆ.  ಇವರು  ಪೆದ್ದು ಪೆದ್ದಾಗಿ ನಟಿಸಿದ ‘ರಾಮಾಚಾರಿ’, ಒಂದಷ್ಟು ತಾಳ್ಮೆ ಗಾಂಭೀರ್ಯತೆಯಿಂದ ನಟಿಸಿದ್ದ ‘ಕನಸುಗಾರ’, ‘ಯಾರೇ ನೀನು ಚೆಲುವೆ’’ ಅಂತಹ ಚಿತ್ರಗಳು,  ‘ಪ್ರೇಮ ಲೋಕ’ದಲ್ಲಿ ಆತ ಕೆಲವೊಂದು ಪ್ರಮುಖ ನಟ ನಟಿಯರನ್ನು ಬೆರೆಸಿ ಸೃಷ್ಟಿಸಿದ ಕೆಲವು ಹಾಡುಗಳು ಇತ್ಯಾದಿಗಳು ಆತನನ್ನು ಮೆಚ್ಚುವಂತೆ ಕೂಡಾ ಮಾಡುತ್ತೆ.

ರವಿಚಂದ್ರನ್ ಎಷ್ಟು ಸಿನಿಮಾದಲ್ಲಿ ಗೆದ್ದಿದ್ದಾರೋ ಅದಕ್ಕೆ ಮಿಗಿಲಾದ ಚಿತ್ರಗಳು ಸೋತಿವೆ ಎಂಬುದು ಕೂಡಾ ನಿಜ.  ಆತ ನಿರ್ಮಿಸಿದ ಪರಭಾಷಾ ಸರಕುಗಳು ಜಯಗಳಿಸುವ ಹಾಗೆ ಆತನ ‘ಏಕಾಂಗಿ’ಯಂತಹ ಹೊಸ ಪ್ರಯತ್ನಗಳು ಮನಸೆಳೆಯಲಿಲ್ಲ.  ಇಷ್ಟಾದರೂ ಕಳೆದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಚಿತ್ರರಂಗದಲ್ಲಿದ್ದು ಇಂದೂ ಕೂಡಾ ಆತ ಸೋಲು ಗೆಲುವುಗಳ ಪರಿಧಿಯಾಚೆಗೆ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾಮಾನ್ಯವಾದ ಮಾತೇನಲ್ಲ.

ಹಂಸಲೇಖ ಅಂತಹ ಮಹಾನ್ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ದೊರಕಿಸಿಕೊಟ್ಟದ್ದು, ಜ್ಯೂಲಿ ಚಾವ್ಲಾಳನ್ನು ಮೊದಲು ಪ್ರಸಿದ್ಧಿ ಪಡಿಸಿದ್ದು, ಖುಷ್ಬೂಗೆ ಅಮೋಘ ಪ್ರಸಿದ್ಧಿ ತಂದಿದ್ದು, ಶಿಲ್ಪಾ ಶೆಟ್ಟಿಗೆ ಕೂಡಾ  ಸುಂದರವಾಗಿ ಚಿತ್ರಗಳಲ್ಲಿ ಕಾಣಬಲ್ಲಳು  ಎಂದು ತೋರಿದ್ದು ಇವೆಲ್ಲಾ ರವಿಯ ಗರಿಮೆಗಳೇ.  ಇಷ್ಟಾಗಿಯೂ ಈತ ತನ್ನ ಚಿತ್ರಗಳಲ್ಲಿ ಯಾವುದೋ ವೈಭವೀಕರಣ ತುರುಕಿ ಯಶಸ್ಸನ್ನು ಹುಡುಕುತ್ತಿರುವುದರ ಜೊತೆ ಜೊತೆಗೆ ಸೃಜನಶೀಲತೆಯಲ್ಲಿ ಮತ್ತಷ್ಟು ಪ್ರಯತ್ನಿಸಬಹುದಿತ್ತು ಎಂದು ಅನಿಸದಿರದು. 

ಈ ಹಿಂದೆ ತಮ್ಮ ತಮ್ಮನನ್ನು ಚಿತ್ರರಂಗಕ್ಕೆ ತರಲು ಯತ್ನಿಸಿದ್ದ ರವಿಚಂದ್ರನ್ ಇದೀಗ ತಮ್ಮ ಪುತ್ರರನ್ನು ಚಿತ್ರರಂಗಕ್ಕೆ ತರುವ ಯತ್ನದಲ್ಲಿದ್ದಾರೆ.  ತಮ್ಮ ಮಕ್ಕಳನ್ನು ಮುಂದೆ ತಂದು ತಾವು ಮುಂಬರುವ ದಿನಗಳಲ್ಲಿ ಹಿಂದೆ ಸರಿಯುವ ಮಾತನ್ನು ಕೂಡಾ ಇತ್ತೀಚೆಗೆ ಹೇಳಿದ್ದಾರೆ.


ಈ ಉತ್ಸಾಹೀ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿ ಅವರಿಂದ ಉತ್ತಮ ಚಿತ್ರಗಳು ಮೂಡಲಿ ಎಂದು ಹಾರೈಸೋಣ.

Sunday, May 29, 2016

ರೆಬಲ್ ಸ್ಟಾರ್ ಅಂಬರೀಶ್ ಅವರ 64ನೇ ಹುಟ್ಟು ಹಬ್ಬದ ಶುಭಾಶಯಗಳು


ಅಂಬರೀಶ್ ಅವರಿಗೆ ವಯಸ್ಸು ಅರವತ್ನಾಲ್ಕಾಯಿತು.   ಅವರು ಚಿತ್ರರಂಗದಲ್ಲೇ ತಮ್ಮ ನಲವತ್ನಾಲ್ಕು   ವರ್ಷಗಳನ್ನು ತುಂಬಿದವರು.    ಅವರು ಹುಟ್ಟಿದ್ದು ಮೇ 29, 1952ರಲ್ಲಿ.  ನಾಗರಹಾವು ಚಿತ್ರದಲ್ಲಿ ಜಲೀಲನಾಗಿ "ಏ ಬುಲ್-ಬುಲ್ ಮಾತಾಡಕಿಲ್ವ ?" ಅಂತ ಬಂದ ಈ ಹುಡುಗನ ಈ ಚಹರೆಗೂ, ಮಹಾರಾಜನ ಮೈಕಟ್ಟನ್ನು ಬೆಳೆಸಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಇಂದಿನ ಅಂಬಿಗೂ ಅಜಗಜಾಂತರವಿದೆ.  ಒಂದು ರೀತಿಯಲ್ಲಿ ಅದು ಅಂದಿನ ಮಳವಳ್ಳಿ ಅಮರನಾಥ ಹುಚ್ಚೇಗೌಡನಿಗೂ ಇಂದಿನ ಜನಪ್ರತಿನಿದಿ, ಜನಪ್ರಿಯ ನಟ ಅಂಬರೀಶ್ ಅವರಿಗೂ ಇರುವ ಅಗಾಧತೆಯ ಪ್ರತೀಕವೂ ಹೌದು. 

Wednesday, May 11, 2016

ಜಿಡ್ಡು ಕೃಷ್ಣಮೂರ್ತಿ ಅವರ 122ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಜಿಡ್ಡು ಕೃಷ್ಣಮೂರ್ತಿ:(1885-1986)
ಜೆ ಕೃಷ್ಣಮೂರ್ತಿ ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 11ನೇ ಮೇ 1895ರಲ್ಲಿ ಜನಿಸಿದರು.  1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು.
 ಹಿಂದೂ ಧರ್ಮ ಮತ್ತು ಬೌದ್ಧ ತತ್ವಗಳಿಗೆ ಪಾಶ್ಚಾತ್ಯ ಸ್ವರೂಪಗಳ ಮಿಶ್ರಣವನ್ನು ನೀಡಿದ ಥಿಯೋಸೋಫಿಕಲ್ ಸೊಸೈಟಿಯ ಅಧ್ಯಕ್ಷರಾದ ಸ್ವಯಂ ಅನ್ನಿ ಬೆಸೆಂಟ್ ಅವರೇ ಈ ಪ್ರಚಾರವನ್ನು ನೀಡಿದ್ದರು.  ಕೃಷ್ಣಮೂರ್ತಿಯವರಿಗೆ ಈ ವಿಶ್ವಗುರು ಪಟ್ಟಕ್ಕೆ ಸಕಲ ತರಬೇತಿಗಳನ್ನೂ ಅನ್ನಿ ಬೆಸೆಂಟ್ ಮತ್ತವರ ಸಂಗಡಿಗರು ನೀಡಿದ್ದರಾದರೂ, ಇಪ್ಪತ್ತು ವರ್ಷಗಳ ನಂತರದಲ್ಲಿ ಅಂದರೆ 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರಾಗಿಬಿಟ್ಟರು.  ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿಬಿಟ್ಟರು. ಅಲ್ಲಿಂದ ಮುಂದೆ ಏಕಾಂಗಿಯಾಗಿ ನಡೆದ ಜೆ. ಕೃಷ್ಣಮೂರ್ತಿಯವರು, ತಮ್ಮ  ಮುಂದಿನ ಅರವತ್ತು ವರ್ಷಗಳ ಜೀವಿತಾವಧಿಯಲ್ಲಿ  ವಿಶ್ವದಾದ್ಯಂತ ಸಂಚರಿಸಿ, ಮಾನವ ಸಮಾಜದಲ್ಲಿ ಸ್ವಯಂದಾರ್ಶನಿಕ ಬದಲಾವಣೆಯನ್ನು ತರಲು ಅಪಾರವಾದ ಕೆಲಸ ಮಾಡಿದರು. 

Wednesday, May 4, 2016

ಅನಂತನಾಗ್ ಅವರ ಜೀವನ-ಚಲನಚಿತ್ರ ಇತಿಹಾಸ

 ಅನಂತನಾಗ್ ಅವರ ಮಾತುಗಳಲ್ಲಿಯೇ :ಭಾಗ-1

ವೀಕ್ಸಿಸಿ ಉಪೇಂದ್ರ ರವರು ವೀಕ್ ಎಂಡ್ ವಿಥ್ ರಮೇಶ್ ದಲ್ಲಿ (Part-2)

ವೀಕ್ಸಿಸಿ ಉಪೇಂದ್ರ ರವರು ವೀಕ್ ಎಂಡ್ ವಿಥ್ ರಮೇಶ್ ದಲ್ಲಿ (Part-2)

ಅನಂತನಾಗ್ ಅವರ ಜೀವನ-ಚಲನಚಿತ್ರ ಇತಿಹಾಸ

ಅನಂತನಾಗ್ ಅವರ ಮಾತುಗಳಲ್ಲಿಯೇ :ಭಾಗ-2

ವೀಕ್ಸಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿ :

ಅನಂತನಾಗ್ ಅವರ ಜೀವನ-ಚಲನಚಿತ್ರ ಇತಿಹಾಸ ಭಾಗ-3

ಅನಂತನಾಗ್ ಅವರ ಮಾತುಗಳಲ್ಲಿಯೇ :ಭಾಗ-3