Translate in your Language

Tuesday, July 26, 2016

ಎಸ್.ಎಲ್. ಭೈರಪ್ಪ ಅವರಿಗೆ 85ನೇ ಹುಟ್ಟುಹಬ್ಬದ ಶುಭಾಶಯಗಳು



ಎಸ್.ಎಲ್.ಭೈರಪ್ಪನವರು 1934ರ ಜುಲೈ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ ಇವರು ಪ್ರಾಥಮಿಕ ಅಭ್ಯಾಸವನ್ನು ಸಂತೇಶಿವರ ಹಾಗೂ ಹತ್ತಿರದ ಗ್ರಾಮಗಳಲ್ಲಿ ಪೂರೈಸಿದರು. ಮೈಸೂರಿಗೆ ಬಂದು ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ನಂತರ ಮಹಾರಾಜ ಕಾಲೇಜಿನಿಂದ 1957ರಲ್ಲಿ ಬಿ.ಎ. (ಅನರ‍್ಸ್) ಪದವಿ ಗಳಿಸಿದರು. ೧೯೫೮ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್ ಗಳಿಸಿ ಎರಡು ಸುವರ್ಣ ಪದಕಗಳೊಂದಿಗೆ ಪಡೆದುಕೊಂಡರು.

Tuesday, July 19, 2016

ಎಂ.ಆರ್. ವಿಠಲ್ ಅವರ ೧೦೮ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಕನ್ನಡ ಚಲನಚಿತ್ರ ನಿರ್ದೇಶಕರಲ್ಲಿ ಪ್ರಮುಖ ಹೆಸರಾದ ಮೈಸೂರು ರಾಘವೇಂದ್ರರಾವ್ ವಿಠಲ್ ಅವರು 1908ರ ಜುಲೈ 19ರಂದು ಜನಿಸಿದರು. ಮೈಸೂರು ಮತ್ತು ಮದ್ರಾಸುಗಳಲ್ಲಿ ಅವರ ವ್ಯಾಸಂಗ ನೆರವೇರಿತು. ಆಟೋಮೊಬೈಲ್ ಮತ್ತು ಇಂಜಿನಿಯರಿಂಗ್ ಪದವೀಧರರಾದ ವಿಠಲ್ ಆ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿಯೂ ಹೆಸರು ಮಾಡಿದರು. 1928ರಲ್ಲಿ ಅವರು ಕೊಲ್ಲಾಪುರದಲ್ಲಿ ಸ್ವಂತ ಕಾಲೇಜನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಧ್ವನಿಗ್ರಹಣದ ಬಗ್ಗೆ ಆಸಕ್ತಿ ಬೆಳೆಯಿತು. ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಬಳಿ ಚಲನಚಿತ್ರ ಕಲೆಯನ್ನು ಕಲಿತ ಅವರು ಲಾಹೊರಿಗೆ ತೆರಳಿ ಶಬ್ದ ಗ್ರಹಣವನ್ನು ವಿಶೇಷವಾಗಿ ಅಧ್ಯಯನ ಮಾಡಿದರು.


1938 ರಲ್ಲಿ ವಿಠಲ್ 'ಆಗ್' ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದರು. ಹಲವಾರು ತಮಿಳು ಮತ್ತು ಮಲೆಯಾಳಂ ಚಿತ್ರಗಳನ್ನೂ ನಿರ್ದೇಶಿಸಿದರು. 1952ರಲ್ಲಿ 'ಬರ್ನಿಂಗ್ ಸಿಟಿ' ಎಂಬ ಫ್ರೆಂಚ್ ಭಾಷೆಯ ಚಿತ್ರವನ್ನು ನಿರ್ದೇಶಿಸಿದರು. ವಿಠಲ್ ಕನ್ನಡ ಚಿತ್ರ್ರರಂಗಕ್ಕೆ ಬಂದಿದ್ದು ತಡವಾಗಿ. 1963ರಲ್ಲಿ ವಾದಿರಾಜ್ ಮತ್ತು ಜವಾಹರ್ ನಿರ್ಮಾಣದ 'ನಂದಾದೀಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.  ಅಲ್ಲಿಂದ ಮೊದಲ್ಗೊಂಡಂತೆ ಅವರು  ಕನ್ನಡದಲ್ಲಿ ಅನೇಕ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Friday, July 15, 2016

ರಂ.ಶ್ರೀ ಮುಗಳಿ ಅವರ 111ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ರಂ.ಶ್ರೀ. ಮುಗುಳಿ
ರಂ.ಶ್ರೀ. ಮುಗುಳಿಯವರು ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ 1906 ರಲ್ಲಿ ಜುಲೈ 15 ರಂದು ಜನಿಸಿದರು. ಇವರ ತಂದೆ ಶ್ರೀನಿವಾಸರಾಯರು. ತಾಯಿ ಕಮಲಮ್ಮನವರು. ರಸಿಕರಂಗ ಎಂಬುದು ಇವರ ಕಾವ್ಯನಾಮ. ರಂಗನಾಥ ಶ್ರೀನಿವಾಸ ಇವರ ಪೂರ್ಣ ಹೆಸರು. ಇವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಬಿಜಾಪುರದ ಬಾಗಲಕೋಟೆಗಳಲ್ಲಿ ನಡೆಯಿತು. ೧೯೨೪ರಲ್ಲಿ ಧಾರವಾಡಕ್ಕೆ ಬಂದು ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಬಿ.ಎ. (ಸಂಕೃತ ಅನರ‍್ಸ್) ೧೯೩೦ರಲ್ಲಿ ಎಂ.ಎ. (ಕನ್ನಡ) ಪದವಿಯನ್ನು ಪಡೆದರು. ಪಡೆದರು. ಇಂಗ್ಲಿಷ್‌ನಲ್ಲಿಯೂ ಎಂ.ಎ. ಪದವಿಯನ್ನು ಪಡೆದರು. ಅನಂತರ ಮುಂಬಯಿಯಲ್ಲಿ ಬಿ.ಟಿ. ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದರು. ಅನಂತರ ೧೯೩೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾದರು.

Saturday, July 9, 2016

ಪ್ಯಾರಿಸಿನಲ್ಲಿ ಕಾರ್ನಾಡ್, ಡಂಕನ್ ಕೌಮಾರ್ಯ ಹರಣ!

ಆನ್ ಡಂಕನ್ ಫ್ರೆಂಚ್ ಸಾಹಿತ್ಯದ ವಿದ್ಯಾರ್ಥಿನಿ. ಪ್ಯಾರಿಸ್ಸಿನಲ್ಲಿ ಇವರ ಮಿತ್ರ ಕೃಷ್ಣ ಬಸರೂರ್ ವಾಸಿಸುತ್ತಾನೆ ಎಂದು ತಿಳಿದಾಗ ಅಲ್ಲಿ ಜೊತೆಗೆ ಪ್ರವಾಸ ಮಾಡ ಬಯಸಿದಳು. ಅವಳಿಗೇನೋ ಸಂಶೋಧನೆ ಮಾಡುವುದಿತ್ತು. ಬಸರೂರನ ಮನೆಯಲ್ಲೇ ಇಳಿದುಕೊಂಡರು. ಅವಳಿಗೆ ಫ್ರೆಂಚ್ ಭಾಷೆ ಮಾತ್ರವಲ್ಲ, ಸಾಹಿತ್ಯ, ಇತಿಹಾಸ, ಪೋಲಿ ಜೋಕ್ಸ್ ಕೂಡ ಗೊತ್ತಿದ್ದವಂತೆ. ಅವಳ ಬಾಯ್‌ಫ್ರೆಂಡ್ ರಾಬಿನ್ ಎಂಬವ ಮದುವೆಯಾಗದೆಯೇ ದೇಹಸಂಗ ಬೇಡ ಎಂದು ಹಟ ಹಿಡಿದಿದ್ದ. ಅವಳಿಗೆ ಮದುವೆ ಮುಖ್ಯವಲ್ಲ, ಅನುಭವ ಮುಖ್ಯವಾಗಿತ್ತು. ಆನ್ ಡಂಕನ್ ಹಾಗೂ ಗಿರೀಶ ಇಬ್ಬರೂ ಪ್ಯಾರಿಸ್ಸಿನಲ್ಲಿ ಸಮೀಪ ಬಂದರು. ಇಬ್ಬರ ಕೌಮಾರ್ಯ ಹರಣವಾಗಿತ್ತು. 

Thursday, July 7, 2016

ಸ್ವರ್ಣ ಕಮಲ ಗೆದ್ದ 'ಸಂಸ್ಕಾರ' ಚಿತ್ರದ ಮೇಕಿಂಗ್

ಗಿರೀಶರನ್ನು ನಾಟಕರಂಗದಿಂದ ಚಿತ್ರರಂಗದೆಡೆಗೆ ಕರೆತಂದದ್ದು ಸಂಸ್ಕಾರ ಚಿತ್ರ. ಈ ಚಿತ್ರದ ಆಯ್ಕೆ, ಅದರ ನಿರ್ಮಾಣ, ಪಾತ್ರಗಳ ಶೋಧನೆ-ಆಯ್ಕೆ, ಶೃಂಗೇರಿಯ ಬಳಿ ಮುಕ್ತವಾದ ವಾತಾವರಣದಲ್ಲಿ ಹೊರಾಂಗಣದಲ್ಲೇ ಚಿತ್ರಿಸಿದ್ದು, ಇದನ್ನು ಬ್ಯಾನ್ ಮಾಡಲು ಹೊರಟ ಸರಕಾರವೇ ಬಹುಮಾನ ನೀಡಿದ್ದು, ತಾವು ಅನಿವಾರ್ಯವಾಗಿ ದಿಗ್ದರ್ಶಿಸುವುದನ್ನು ಬಿಟ್ಟು ಮುಖ್ಯಪಾತ್ರ ವಹಿಸಿದ್ದು, ಆಸ್ಟ್ರೇಲಿಯನ್ ಕ್ಯಾಮರಾಮನ್ ಅನಾಯಾಸವಾಗಿ ದೊರೆತದ್ದು ಮೊದಲಾದ ಎಲ್ಲ ವಿವರಗಳನ್ನು ದೀರ್ಘವಾದ ಅಧ್ಯಾಯದಲ್ಲಿ ಗಿರೀಶರು ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಇದನ್ನು ಆನಂದಿಸಲು ಮೂಲವನ್ನೇ ಓದುವುದು ವಿಹಿತ. 

ಅತ್ಯಂತ ಸಂಕ್ಷಿಪ್ತವಾಗಿ ಈ ಸಂಸ್ಕಾರ ಚಿತ್ರ ಎಲ್ಲರ ಗಮನ ಸೆಳೆದುದರ ಬಗ್ಗೆ ಬರೆಯುವೆ.

Wednesday, July 6, 2016

ಕಾರ್ನಾಡರ ಆತ್ಮಕತೆ : ವಂಶವೃಕ್ಷ ಚಿತ್ರಕತೆ

1970ರಲ್ಲಿ ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್‌ನೊಂದಿಗಿದ್ದ ಏಳು ವರ್ಷದ ಒಪ್ಪಂದ ಮುಗಿದಿತ್ತು. ಮದ್ರಾಸ್ ಕೆಲಸ ಬಿಟ್ಟು ಧಾರವಾಡದಲ್ಲಿ ನೆಲೆಯೂರುವ ಇಚ್ಛೆಯಿಂದ ಸಾರಸ್ವತಪುರದಲ್ಲಿ, ಒಂದು ಮನೆ ಕೊಂಡರು. ಆ ವೇಳೆಗೆ ಜಿ.ವಿ.ಅಯ್ಯರ್ ಅವರು ಭೈರಪ್ಪನವರ ಲೋಕಪ್ರಿಯ ಕಾದಂಬರಿಯಾದ ವಂಶವೃಕ್ಷವನ್ನು ಆಧರಿಸಿ ಒಂದು ಚಿತ್ರ ತೆಗೆಯಲು ಹೊರಟಿದ್ದರು. ಅದನ್ನು ನಿರ್ದೇಶಿಸಲು ಬಿ.ವಿ.ಕಾರಂತರಿಗೆ ಕೇಳಿದರು. ಕಾರಂತರು ಕಾರ್ನಾಡರನ್ನು ತಮ್ಮೊಂದಿಗೆ ಸೇರಲು ಆಮಂತ್ರಿಸಿದರು. ಸಂಸ್ಕಾರ ಚಿತ್ರದ ಯಶಸ್ಸಿನಿಂದಾಗಿ ಗಿರೀಶರಿಗೆ ಚಿತ್ರಜಗತ್ತಿನಲ್ಲಿ ಆಸಕ್ತಿ ಉಂಟಾಗಿತ್ತು. ಅವರಿಗೆ ಆ ಚಿತ್ರ ನಿರ್ದೇಶಿಸುವ ಅವಕಾಶ ದೊರೆತಿರಲಿಲ್ಲ. ಆದ್ದರಿಂದ ತಮ್ಮನ್ನು ಸಹಾಯಕ ನಿರ್ದೇಶಕ ಮಾಡಲು ಕೇಳಿದರು. ಕಾರಂತರು ಬಹಳ ಸಂತೋಷದಿಂದ ಅವರನ್ನು ಸಹಾಯಕ ಏಕೆ? ಜಂಟಿ ನಿರ್ದೇಶಕರಾಗಿರಿ ಎಂದು ಆಮಂತ್ರಿಸಿದರು. ಆಗ ಭೈರಪ್ಪನವರು ದೆಹಲಿಯಲ್ಲಿದ್ದರು. ಅಯ್ಯರ್, ಕಾರಂತ, ಕಾರ್ನಾಡ ದಿಲ್ಲಿಗೆ ಹೋಗಿ ಲೇಖಕರನ್ನು ಭೆಟ್ಟಿಯಾಗಿ ಚರ್ಚಿಸಿದರು. ವಂಶವೃಕ್ಷವನ್ನು ಚಿತ್ರೀಕರಿಸಲು ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯನವರಂತಹ ಅತಿರಥ- ಮಹಾರಥರೆಲ್ಲ ಹವಣಿಸಿದ್ದರು. ಭೈರಪ್ಪನವರು ಒಪ್ಪಿರಲಿಲ್ಲ. ಈ ವೇಳೆಗೆ ಅಯ್ಯರರ ಜೀವನದಲ್ಲಿ ಕಾರಂತರ ಮರುಪ್ರವೇಶವಾಗಿತ್ತು. ಇಬ್ಬರೂ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಕಾರಂತರಿಗೆ ಮನೆಯಲ್ಲಿ ಅಡಿಗೆಗೆ ಗತಿಯಿಲ್ಲದಾಗ, ಅಯ್ಯರ್ ಮತ್ತು ಅವರ ಹೆಂಡತಿ ಹೋಟಲ್‌ನಿಂದ ಎರಡು ರೈಸ್-ಪ್ಲೇಟ್ ತರಿಸಿದಾಗ, ಕಾರಂತರೊಂದಿಗೆ ಹಂಚಿಕೊಂಡಿದ್ದರಂತೆ.

Tuesday, July 5, 2016

ಎಲ್ಲಿಯೂ ನಿಲ್ಲದಿರು: ರಾಷ್ಟ್ರಕವಿ ಕುವೆಂಪು


ಎಲ್ಲಿಯೂ ನಿಲ್ಲದಿರು

ಮನೆಯನೆಂದೂ ಕಟ್ಟದಿರು
ಕೊನೆಯನೆಂದೂ ಮುಟ್ಟದಿರು
ಓ ಅನಂತವಾಗಿರು ! 
ಓ ನನ್ನ ಚೇತನಾ, 
ಆಗು ನೀ ಅನಿಕೇತನ ! 

ಸಾವಿರದ ಒಂಬೈನೂರ ನಾಲ್ಕು, ಡಿಸೆಂಬರ್, ಇಪ್ಪತ್ತೊ೦ಭತ್ತರಂದು (29-12-1904) ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ - ಕುವೆಂಪು) ಜನಿಸಿದರು

ಅಂದರೆ, ಇಂದಿಗೆ ಸುಮಾರು ಒಂದು ನೂರಾ ಹನ್ನೆರಡು ವರ್ಷಗಳ ಹಿಂದೆ ಕ್ರೋಧಿನಾಮ ಸಂವತ್ಸರದ ಮಾರ್ಗಶೀರ್ಷ - ಬಹುಳ ಸಪ್ತಮೀ ಗುರುವಾರದ ಉತ್ತರಾ ನಕ್ಷತ್ರದಲ್ಲಿ. 


Monday, July 4, 2016

ಜಗ್ಗು ದಾದಾ ಕನ್ನಡ ಸೂಪರ್ ಹಿಟ್ ಚಿತ್ರದ ಬಗ್ಗೆ ಕೆಲವು ಮಾತುಗಳು

ಒಂದು ಒಳ್ಳೆ ಸದಭಿರುಚಿಯ ಫ್ಯಾಮಿಲಿ ಎಂಟೆರ್ಟೈನೆರ್. ಕಾಮಿಡಿ-ಆಕ್ಷನ್-ರೋಮ್ಯಾನ್ಸ್-ಸೆಂಟಿಮೆಂಟ್ ಎಲ್ಲದರ ಪರಿಪೂರ್ಣ ಮಿಶ್ರಣ 'ಜಗ್ಗು ದಾದಾ'. ಫ್ಯಾಮಿಲಿ ಆಡಿಯನ್ಸ್ ಟಾರ್ಗೆಟ್ ಮಾಡಿಯೇ ಮಾಡಿರುವ ಈ ಚಿತ್ರ ತಾಂತ್ರಿಕವಾಗಿ ತುಂಬಾ ಸೊಗಸಾಗಿ ಮೂಡಿ ಬಂದಿದೆ.

ನಗೆಯ ರಸದೌತಣ ಕಟ್ಟಿಟ್ಟ ಬುತ್ತಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಸ್ ಮತ್ತು ಕ್ಲಾಸ್ ಅವತಾರಗಳಲ್ಲಿ ಸೂಪರ್ ಆಗಿ ಮಿಂಚಿದ್ದಾರೆ. ಅವರ ಫ್ಯಾನ್ಸ್ ಗೆ ಡಬಲ್ ಧಮಾಖ. ಬೆಡಗಿ ದೀಕ್ಷಾ ಸೇಥ್ ಡಿ ಬಾಸ್ ಗೆ ತುಂಬಾ ಚೆನ್ನಾಗಿಯೇ ಸಾಥ್ ನೀಡಿದ್ದಾರೆ. ರವಿಶಂಕರ್ ಇಲ್ಲಿಯವರೆಗೂ ಕಾಣಸಿಗದ ರೋಲ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ , ಊರ್ವಶಿ, ಶರತ್ ಲೋಹಿತಾಶ್ವ, ಸೃಜನ್ ಲೋಕೇಶ್, ರಜತ್ ಬೇದಿ, ಉರ್ಮಿಳ ಹಾಗೂ ಮುಂತಾದವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

Saturday, July 2, 2016

ಯೋಗ ಗುರು ಬಿ. ಕೆ. ಎಸ್ ಅಯ್ಯಂಗಾರ್

ಪ್ರೊ. ಬಿ. ಕೆ. ಎಸ್. ಅಯ್ಯಂಗಾರ್ ಅವರು 1918 ಡಿಸೆಂಬರ್ 14ರಂದು ಕರ್ನಾಟಕದ ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದಲ್ಲಿ ಹುಟ್ಟಿದವರು. ಅವರು  ಅತ್ಯಂತ ಬಡ ಕುಟುಂಬದಿಂದ ಬಂದವರು.


ಬಾಲ್ಯದ ಹೆಸರಿನ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು ಮುಂದೆ  ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್ ಎಂದು ಪ್ರಸಿದ್ಧರಾದರು.  ಜಗತ್ತಿನ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳ ನಡುವೆ ‘ಬಿ.ಕೆ.ಎಸ್.ಅಯ್ಯಂಗಾರ್ ಸ್ಕೂಲ್ ಆಫ್ ಯೋಗ’ ಎಂಬ ಪರಿಕಲ್ಪನೆಯನ್ನು ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದರು.  ಪ್ರತ್ಯಕ್ಷ ವಾಗಿ ಹಾಗೂ ಪರೋಕ್ಷವಾಗಿ ಬಹುಪಾಲು ಮಂದಿ ಯೋಗ ಶಿಕ್ಷಕರು ಗುರೂಜಿ ಪ್ರೊ.ಬಿ.ಕೆ. ಅಯ್ಯಂಗಾರ್ ಅವರಿಂದ ಪ್ರೇರಿತರಾದವರು. ಇಂದು ವಿಶ್ವದಾದ್ಯಂತ ಯೋಗ ಎಂಬ ಭಾರತೀಯ ಕಲ್ಪನೆಯು ಹೆಚ್ಚು ಹೆಚ್ಚು ಸಾಕಾರಗೊಳ್ಳುವಲ್ಲಿ ಪ್ರೊ. ಬಿ. ಕೆ. ಎಸ್. ಅಯ್ಯಂಗಾರ್ ಅವರ ಕೊಡುಗೆ ಅಪರಿಮಿತವಾದುದು.

ಗೋಲ್ಡನ್ ಸ್ಟಾರ್ ಗಣೇಶ್ ಅವರ 39ನೇ ಹುಟ್ಟುಹಬ್ಬದ ಶುಭಾಶಯಗಳು !

Golden Star Ganesh 
ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನರಂತಹ ಮೇರು ನಟರು ಮರೆಯಾಗಿ, ಕೆಲವೊಂದು ನಟರೆಲ್ಲಾ ಅರೆ ಬರೆ ಗಡ್ಡ ಬಿಟ್ಟು, ಪಕ್ಕದ ರಾಜ್ಯದ ಕೆಲವು  ಹೀರೋಗಳಂತೆ ತಮ್ಮ ಮುಖಕ್ಕೊಪ್ಪುವಂತೆ  ಕಪ್ಪು ಕನ್ನಡಕ ಧರಿಸಿಯೋ,  ಮಚ್ಚು – ಕತ್ತಿ – ಚೈನುಗಳನ್ನು ಹಿಡಿದ ವಕ್ರವದನಾರವಿಂದರಾಗಿಯೋ ವಿಭಿನ್ನ ದಾರಿ ಹಿಡಿದಿದ್ದ ಸಮಯದಲ್ಲಿ, ಅಲ್ಲಲ್ಲಿ ದೂರದರ್ಶನ ಮತ್ತು ಚಿತ್ರರಂಗದಲ್ಲಿನ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚುತ್ತಿದ್ದ ಗಣೇಶ್ ಎಂಬ ಹುಡುಗ ‘ಮುಂಗಾರು ಮಳೆ’ ಎಂಬ ಯೋಗರಾಜ ಭಟ್ಟರ ದೃಶ್ಯ ಕಾವ್ಯದೊಂದಿಗೆ ಹೊಸ ಭರವಸೆ ತಂದರು.  ಜುಲೈ 2,1977, ಇವರ ಹುಟ್ಟು ಹಬ್ಬ.  ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿ ಇವರ ಹುಟ್ಟೂರು. 

Friday, July 1, 2016

ಜೀವರಕ್ಷಕ ವೈದ್ಯರಿಗೆ ವೈದ್ಯದಿನಾಚರಣೆಯ ಹಾರ್ಧಿಕ ಅಭಿನಂದನೆಗಳು


ವೈದ್ಯರ ದಿನ ಶುರುವಾದದ್ದು ಹೀಗೆ:


 ಡಾ.ಬಿದನ್ ಚಂದ್ರ ರಾಯ್ (ಜನನ:ಜುಲೈ 1,1882, ನಿಧನ:ಜುಲೈ 1,1962) ಒಬ್ಬ ಶ್ರೇಷ್ಠ ಸಾಧಕ, ಭಾರತ ಕಂಡ ಹೆಮ್ಮೆಯ ಪ್ರತಿಭೆ ಮತ್ತು ವ್ಯಕ್ತಿತ್ವವುಳ್ಳವರು.ಇಂದಿನ ಸಮಾಜದಲ್ಲಿ ಅಧಿಕಾರ ಸಿಕ್ಕರೆ ತಮ್ಮ ಸ್ವಾರ್ಥ ಸಾಧನೆಗೇ ಹೊಂದಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ವ್ಯಕ್ತಿತ್ವದ ಜೊತೆಗೆ ಹಿಂದಿರುವ ಹೆಸರನ್ನೂ ಹಾಳುಮಾಡಿಕೊಳ್ಳುವರೇ ಹೆಚ್ಚು. ಆದರೆ   ಡಾ.ಬಿದನ್ ಚಂದ್ರ ರಾಯ್ ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿಯಾಗಿದ್ದುಕೊಂಡು  ಬದುಕಿನುದ್ದಕ್ಕೂ  ಸೇವೆಯನ್ನೇ ಉಸಿರಾಗಿಸಿ ಕೊಂಡಿದ್ದ ಅವರು ವೈದ್ಯಕೀಯ ಇತಿಹಾಸದಲ್ಲಿಯೂ ಹಲವು ದಾಖಲೆಗೆ ಕಾರಣಿಭೂತರಾಗಿದ್ದು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡವರು.

ಭಾರತೀಯ ವೈದ್ಯಕೀಯ ಸಂಘದ (ಐ.ಎಮ್.ಎ) ಸಂಸ್ತಾಪಕರು ಮತ್ತು ಅದರ ಮೊದಲ ಅಧ್ಯಕ್ಷರಾಗಿದ್ದ ಡಾ.ಬಿದನ್ ಚಂದ್ರ ರಾಯ್ ಅವರು ಭಾರತೀಯ ವೈದ್ಯಕೀಯ ಮಂಡಳಿ (ಎಮ್.ಸಿ.ಇ) ಸ್ತಾಪನೆಯಲ್ಲಿ ಶ್ರಮಿಸಿದ ಅವರ ಸೇವೆಯನ್ನು ನಾವು ಮರೆಯುವಂತಿಲ್ಲ.

ಕನ್ನಡ ಜಾನಪದ ಗಾಯಕಿ: ಬಿ. ಕೆ. ಸುಮಿತ್ರಾ

ಮಕ್ಕಳೊಂದಿಗೆ ಬಿ ಕೆ ಸುಮಿತ್ರ
ಬಿ. ಕೆ . ಸುಮಿತ್ರಾ ಅಂದರೆ ಹಲವು ಸುಮಧುರ ಗೀತೆಗಳ ನಾದ ಸೌರಭದ ತಂಗಾಳಿ ನಮ್ಮನ್ನಾವರಿಸುತ್ತದೆ.  ಕನ್ನಡ ನಾಡಿನಿಂದ ಸಿನಿಮಾ ಗಾಯನ  ಕ್ಷೇತ್ರಕ್ಕೆ ಕಾಲಿಟ್ಟವರಲ್ಲಿ ಖಂಡಿತವಾಗಿ ಅವರು ಅಗ್ರರ ಸಾಲಿನಲ್ಲಿ ನಿಲ್ಲುವವರು.  ಅಷ್ಟೇ ಅಲ್ಲ ಚಿತ್ರರಂಗದ ಪ್ರಮುಖ ಗಾಯಕರ ಸಾಲಿನಲ್ಲಿ ನಿರಂತರ ಶೋಭಾಯಮಾನರು.

ಬಿ.ಕೆ ಸುಮಿತ್ರಾ ಅವರು ಹುಟ್ಟಿದ್ದು ಜುಲೈ 1, 1946 ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ.  ಮೊದಲು ತಾಯಿ, ನಂತರದಲ್ಲಿ ಸಂಗೀತ ವಿದ್ವಾಂಸ  ಶಾಮಣ್ಣ ಅವರಿಂದ ಸಂಗೀತ ಕಲಿತು ಸಂಗೀತ ಪರೀಕ್ಷೆಗಳಲ್ಲೂ ಉತ್ತೀರ್ಣರಾದ ಬಿ ಕೆ ಸುಮಿತ್ರಾ ಎಂ. ಪ್ರಭಾಕರ್ ಅವರಿಂದ ಸುಗಮಸಂಗೀತ ಕಲಿತರು.  ಎಂ. ಪ್ರಭಾಕರ್ ಅವರ ಸಹೋದರಿ ಪ್ರಸಿದ್ಧ ನಟಿ ಪಂಡರೀಬಾಯಿ ಅವರು ಬಿ. ಕೆ. ಸುಮಿತ್ರಾ ಅವರ ಸಂಗೀತ ಸಾಮರ್ಥ್ಯವನ್ನು  ಚಲನಚಿತ್ರರಂಗದ ಹಲವು ಪ್ರಮುಖರಿಗೆ ಪರಿಚಯ ಮಾಡಿಕೊಟ್ಟರು.