Translate in your Language

Monday, July 4, 2016

ಜಗ್ಗು ದಾದಾ ಕನ್ನಡ ಸೂಪರ್ ಹಿಟ್ ಚಿತ್ರದ ಬಗ್ಗೆ ಕೆಲವು ಮಾತುಗಳು

ಒಂದು ಒಳ್ಳೆ ಸದಭಿರುಚಿಯ ಫ್ಯಾಮಿಲಿ ಎಂಟೆರ್ಟೈನೆರ್. ಕಾಮಿಡಿ-ಆಕ್ಷನ್-ರೋಮ್ಯಾನ್ಸ್-ಸೆಂಟಿಮೆಂಟ್ ಎಲ್ಲದರ ಪರಿಪೂರ್ಣ ಮಿಶ್ರಣ 'ಜಗ್ಗು ದಾದಾ'. ಫ್ಯಾಮಿಲಿ ಆಡಿಯನ್ಸ್ ಟಾರ್ಗೆಟ್ ಮಾಡಿಯೇ ಮಾಡಿರುವ ಈ ಚಿತ್ರ ತಾಂತ್ರಿಕವಾಗಿ ತುಂಬಾ ಸೊಗಸಾಗಿ ಮೂಡಿ ಬಂದಿದೆ.

ನಗೆಯ ರಸದೌತಣ ಕಟ್ಟಿಟ್ಟ ಬುತ್ತಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಸ್ ಮತ್ತು ಕ್ಲಾಸ್ ಅವತಾರಗಳಲ್ಲಿ ಸೂಪರ್ ಆಗಿ ಮಿಂಚಿದ್ದಾರೆ. ಅವರ ಫ್ಯಾನ್ಸ್ ಗೆ ಡಬಲ್ ಧಮಾಖ. ಬೆಡಗಿ ದೀಕ್ಷಾ ಸೇಥ್ ಡಿ ಬಾಸ್ ಗೆ ತುಂಬಾ ಚೆನ್ನಾಗಿಯೇ ಸಾಥ್ ನೀಡಿದ್ದಾರೆ. ರವಿಶಂಕರ್ ಇಲ್ಲಿಯವರೆಗೂ ಕಾಣಸಿಗದ ರೋಲ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ , ಊರ್ವಶಿ, ಶರತ್ ಲೋಹಿತಾಶ್ವ, ಸೃಜನ್ ಲೋಕೇಶ್, ರಜತ್ ಬೇದಿ, ಉರ್ಮಿಳ ಹಾಗೂ ಮುಂತಾದವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.


ಏನ್ ಮೇಕಿಂಗ್ ಗುರು! ಸಿಂಪ್ಲಿ ಸೂಪರ್. ಸ್ಟಾರ್ ಸಿನಿಮಾ ಅಂದ್ರೆ ಹೀಗಿರಬೇಕು. ಥಿಯೇಟರ್ ಇಂದ ಹೊರಬಂದ ಪ್ರೇಕ್ಷಕರಲ್ಲಿ ೨:೩೦ ಗಂಟೆ ಪರಿಪೂರ್ಣ ಮನರಂಜನೆ ಸವಿದ ಖುಷಿ ಇರುವುದಂತೂ ಖಂಡಿತ. ನಿರ್ದೇಶಕ/ನಿರ್ಮಾಪಕ ರಾಘವೇಂದ್ರ ಹೆಗ್ಡೆ ರವರ ಶ್ರಮ ಪ್ರತಿಯೊಂದು ಫ್ರೇಮ್ ಅಲ್ಲೂ ಕಾಣಸಿಗುತ್ತದೆ.
'ಜಗ್ಗು ದಾದಾ' ದಾದಾಗಿರಿ ಶುರು. ಬಾಕ್ಸ್ ಆಫೀಸ್ ಸುಲ್ತಾನ್ ಇಸ್ ಬ್ಯಾಕ್ !

'ಚಾಮುಂಡಿಯ ಮಗನು ಇವನು, ಶರಣೆಂದರೆ ಕಾಪಾಡುವನು, ಗುಣವಂತನ ರೂಪ ಇವನು'
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸೂಪರ್ ಸ್ವಮೇಕ್ ಬ್ಲಾಕ್ಬಸ್ಟರ್ 'ಜಗ್ಗುದಾದಾ' ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತಾ ಭರ್ಜರಿ 4 ನೇ ವಾರದಲ್ಲಿ ರಾಜ್ಯಾದ್ಯಂತ ಮುನ್ನುಗ್ಗುತ್ತಿದೆ. ಲವ್ಲಿ ಫ್ಯಾಮಿಲಿ ಎಂಟರ್ಟೈನರ್



No comments:

Post a Comment