Translate in your Language

Tuesday, July 26, 2016

ಎಸ್.ಎಲ್. ಭೈರಪ್ಪ ಅವರಿಗೆ 85ನೇ ಹುಟ್ಟುಹಬ್ಬದ ಶುಭಾಶಯಗಳು



ಎಸ್.ಎಲ್.ಭೈರಪ್ಪನವರು 1934ರ ಜುಲೈ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ ಇವರು ಪ್ರಾಥಮಿಕ ಅಭ್ಯಾಸವನ್ನು ಸಂತೇಶಿವರ ಹಾಗೂ ಹತ್ತಿರದ ಗ್ರಾಮಗಳಲ್ಲಿ ಪೂರೈಸಿದರು. ಮೈಸೂರಿಗೆ ಬಂದು ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ನಂತರ ಮಹಾರಾಜ ಕಾಲೇಜಿನಿಂದ 1957ರಲ್ಲಿ ಬಿ.ಎ. (ಅನರ‍್ಸ್) ಪದವಿ ಗಳಿಸಿದರು. ೧೯೫೮ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್ ಗಳಿಸಿ ಎರಡು ಸುವರ್ಣ ಪದಕಗಳೊಂದಿಗೆ ಪಡೆದುಕೊಂಡರು.
ಬರೋಡಾದ ಸಯ್ಯಾಜಿರಾವ್ ಮಹಾರಾಜ್ ವಿಶ್ವವಿದ್ಯಾಲಯದಿಂದ ಸತ್ಯ ಮತ್ತು ಸೌಂದರ್ಯ ಎಂಬ ಇಂಗ್ಲಿಷ್ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿಕೊಂಡರು. ಅನಂತರ ೧೯೫೮ ರಿಂದ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಶಾಸ್ತ್ರದ ಅಧ್ಯಾಪಕರಾಗಿದ್ದರು. ನಂತರ ೧೯೬೦ರಿಂದ 1966ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ೧೯೬೭ ರಿಂದ ೧೯೭೧ರವರೆಗೆ ದೆಹಲಿ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಇವರ ಕಾದಂಬರಿಗಳಲ್ಲಿ ವಂಶವೃಕ್ಷ, ಮತದಾನ, ತಬ್ಬಲಿಯು ನೀನಾದೆ ಮಗನೆ ಕನ್ನಡ ಚಲನಚಿತ್ರಗಳಾಗಿ ಪ್ರಶಸ್ತಿಗಳಿಸಿವೆ.

ಕೃತಿಗಳು
ಧರ್ಮಶ್ರೀ, ಧೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ಗ್ರಹಣ, ಸಾರ್ಥ, ಸಾಕ್ಷಿ, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ಅಂಚು, ನಿರಾಕರಣ, ದಾಟು, ಅನ್ವೇಷಣೆ, ಪರ್ವ, ತಂತು, ಸಾಹಿತ್ಯ, ಮತ್ತು ಪ್ರತೀಕ ಕಥೆ ಮತ್ತು ಕಥಾವಸ್ತು, ಸತ್ಯ ಮತ್ತು ಸೌಂದರ್ಯ, ನೆಲೆ, ನಾನೇಕೆ ಬರೆಯುತ್ತೇನೆ. ಭಿತ್ತಿ, ಮಂದ್ರ, ಅವರಣ ಯಾನ ಇವು ಇವರ ಪ್ರಸಿದ್ದ ಕೃತಿಗಳು


ಗೌರವ, ಪ್ರಶಸ್ತಿ-ಪುರಸ್ಕಾರಗಳು
ಸರಸ್ವತಿ ಸಮ್ಮಾನ್, ಪದ್ಮಶ್ರೀ ಹಾಗೂ ಇವರಿಗೆ ಅಭಿನವ ಕಾಳಿದಾಸ ಎಂಬ ಬಿರುದು ಕೂಡಾ ಇದೆ


ಉಪಯುಕ್ತ  ಲೇಖನಗಳು :

1 comment: