ವೈದ್ಯರ ದಿನ ಶುರುವಾದದ್ದು ಹೀಗೆ:
ಡಾ.ಬಿದನ್ ಚಂದ್ರ ರಾಯ್ (ಜನನ:ಜುಲೈ 1,1882, ನಿಧನ:ಜುಲೈ 1,1962) ಒಬ್ಬ ಶ್ರೇಷ್ಠ ಸಾಧಕ, ಭಾರತ ಕಂಡ ಹೆಮ್ಮೆಯ ಪ್ರತಿಭೆ ಮತ್ತು ವ್ಯಕ್ತಿತ್ವವುಳ್ಳವರು.ಇಂದಿನ ಸಮಾಜದಲ್ಲಿ ಅಧಿಕಾರ ಸಿಕ್ಕರೆ ತಮ್ಮ ಸ್ವಾರ್ಥ ಸಾಧನೆಗೇ ಹೊಂದಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ವ್ಯಕ್ತಿತ್ವದ ಜೊತೆಗೆ ಹಿಂದಿರುವ ಹೆಸರನ್ನೂ ಹಾಳುಮಾಡಿಕೊಳ್ಳುವರೇ ಹೆಚ್ಚು. ಆದರೆ ಡಾ.ಬಿದನ್ ಚಂದ್ರ ರಾಯ್ ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿಯಾಗಿದ್ದುಕೊಂಡು ಬದುಕಿನುದ್ದಕ್ಕೂ ಸೇವೆಯನ್ನೇ ಉಸಿರಾಗಿಸಿ ಕೊಂಡಿದ್ದ ಅವರು ವೈದ್ಯಕೀಯ ಇತಿಹಾಸದಲ್ಲಿಯೂ ಹಲವು ದಾಖಲೆಗೆ ಕಾರಣಿಭೂತರಾಗಿದ್ದು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡವರು.
ಭಾರತೀಯ ವೈದ್ಯಕೀಯ ಸಂಘದ (ಐ.ಎಮ್.ಎ) ಸಂಸ್ತಾಪಕರು ಮತ್ತು ಅದರ ಮೊದಲ ಅಧ್ಯಕ್ಷರಾಗಿದ್ದ ಡಾ.ಬಿದನ್ ಚಂದ್ರ ರಾಯ್ ಅವರು ಭಾರತೀಯ ವೈದ್ಯಕೀಯ ಮಂಡಳಿ (ಎಮ್.ಸಿ.ಇ) ಸ್ತಾಪನೆಯಲ್ಲಿ ಶ್ರಮಿಸಿದ ಅವರ ಸೇವೆಯನ್ನು ನಾವು ಮರೆಯುವಂತಿಲ್ಲ.
ಇದೆಲ್ಲಕ್ಕಿಂತ ಮಿಗಿಲಾಗಿ ಅವರು ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿಯಾಗಿ ನಿಲ್ಲುವುದು ಅವರ ಸೇವಾ ಮನೋಭಾವದಿಂದ. ರಾಜ್ಯದ ಮುಖ್ಯಮಂತ್ರಿಗಿದ್ದು ಕೂಡ ರಾಜ್ಯ ಆಳುವುದರ ಜೊತೆ ಜೊತೆಗೆ ದಿನಂಪ್ರತಿ ಒಂದು ಗಂಟೆ ವೈದ್ಯರಾಗಿ ಕೊಳೆಗೇರಿ ಜನರ ಚಿಕಿತ್ಸೆನೀಡುವ ಮೂಲಕ ವೃತ್ತಿ ನಿಷ್ಠ್ಯೆಯನ್ನು ಮೆರೆದವರು.
ವೈದ್ಯವೃತ್ತಿಯಲ್ಲಿ ಮಹತ್ತರ ಸೇವೆ ಸಲ್ಲಿಸಿ ಮಾದರಿಯಾದ ಬಿ.ಸಿ.ರಾಯ್ ಅವರ ಜನ್ಮ ದಿನವನ್ನು (ಜುಲೈ ೧) ವೈದ್ಯರ ದಿನಾಚರಣೆಯನ್ನಾಗಿ ಆಚರಣೆ ಮಾಡುಲಾಗುತ್ತಿದೆ. ಅವರ ಈ ಸೇವಾ ನಿರತ ಕಾರ್ಯಕ್ಕೆ ಕೇಂದ್ರ ಸರ್ಕಾರ ಅಂದು "ಭಾರತ-ರತ್ನ" ಗೌರವ ನೀಡಿ ಸತ್ಕರಿಸಿದಾಗ ಇಡೀ ವೈದ್ಯ ಲೋಕವೇ ಅಭಿಮಾನದಿಂದ ಕೊಂಡಾಡಿತ್ತು
No comments:
Post a Comment