Translate in your Language

Saturday, September 20, 2014

ದೇವರಾಜ ಅವರಿಗೆ 55 ನೇ ಹುಟ್ಟು ಹಬ್ಬದ ಸಿಹಿ ಹಾರೈಕೆಗಳು

Born: 20 September 1960
ಖಳನಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ಕ್ರಮೇಣವಾಗಿ ನಾಯಕಪಾತ್ರಗಳ ಕಡೆಗೂ ವಾಲಿಕೊಂಡ ದೇವರಾಜ್‌ ಅಪ್ಪಟ ರಂಗಭೂಮಿಯ ಪ್ರಾಡಕ್ಟು. ನಟರಾದ ಅವಿನಾಶ್‌, ದೇವರಾಜ್‌ ಮತ್ತು ಶಂಕರ್‌ನಾಗ್‌ರವರ ಸಂಕೇತ್‌ ಸ್ಟುಡಿಯೋದಲ್ಲಿ ಸೇವೆ ಸಲ್ಲಿಸಿದ ಜಗದೀಶ್‌ ಮಲ್ನಾಡ್‌ ಈ ಮ‌ೂವರೂ ಹೆಚ್ಚೂಕಮ್ಮಿ ಒಂದೇ ಕಾಲಘಟ್ಟದಲ್ಲಿ ಚಿತ್ರರಂಗವನ್ನು ಪ್ರವೇಶಿಸಿದರು. 'ತ್ರಿಶೂಲ' ಎಂಬ ಚಿತ್ರದಲ್ಲಿ ಈ ಮ‌ೂವರೂ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾಯಕನಿಂದ ಒದೆ ತಿನ್ನುವ ಖಳನಾಯಕನ ಪಾತ್ರದಲ್ಲಿಯೇ ಆರಂಭಿಕ ವರ್ಷಗಳಲ್ಲಿ ಕಾಣಿಸಿಕೊಂಡ ದೇವರಾಜ್‌ 'ತರ್ಕ', 'ಉತ್ಕರ್ಷ', 'ಆಗಂತುಕ', 'ಹೆಂಡ್ತಿಗ್ಹೇಳ್ಬೇಡಿ' ಮೊದಲಾದ ಚಿತ್ರಗಳಲ್ಲಿ ಜನಮನವನ್ನು ಸೂರೆಗೊಂಡರು. ಅವರ ಅಭಿನಯಕ್ಕೆ ಒಂದು ಹೊಸ ಆಯಾಮ ಸಿಕ್ಕಿದ್ದು 'ಹುಲಿಯಾ' ಚಿತ್ರದಲ್ಲಿನ ಅವರ ಪಾತ್ರನಿರ್ವಹಣೆಯಿಂದ ಎನ್ನಬಹುದು.


With his Son Prajwal Devraj
ತನ್ನ ಮಗನ ಕಣ್ಣುಕಿತ್ತವರ ಕುರಿತು ಶಾಪಹಾಕುತ್ತಾ ಸಾರ್ವಜನಿಕ ಸ್ಥಳದಲ್ಲಿ ಆಕ್ರಂದನ ಮಾಡುವ 'ಹುಲಿಯಾ' ಚಿತ್ರದಲ್ಲಿನ ದೇವರಾಜ್‌ ಅಭಿನಯವನ್ನು ಕಂಡ ಸಾಹಸಸಿಂಹ ವಿಷ್ಣುವರ್ಧನ್‌ರವರು, 'ಜಯನಗರ ಷಾಪಿಂಗ್‌ ಕಾಂಪ್ಲೆಕ್ಸ್‌ ಬಳಿಯಲ್ಲಿ ಜಮಾವಣೆಗೊಂಡಿದ್ದ ಅಷ್ಟು ಜನಗಳ ಎದುರಿಗೆ ಅಂಥದ್ದೊಂದು ಅಭಿನಯವನ್ನು ನೀಡಲು ನಿಮಗೆ ಹೇಗೆ ಸಾಧ್ಯವಾಯಿತು ದೇವರಾಜ್‌?' ಎಂದು ಕೇಳುವ ಮ‌ೂಲಕ ತಮ್ಮ ವಿಸ್ಮಯವನ್ನು ವ್ಯಕ್ತಪಡಿಸಿದ್ದರು.

ಇಂಥ ಹಲವು ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುವ ದೇವರಾಜ್‌, ಅದನ್ನು ಹೊರತುಪಡಿಸಿದಂತೆ ನಡವಳಿಕೆಯ ವಿಷಯದಲ್ಲಿ ಅಪ್ಪಟ ಸ್ಥಿತಪ್ರಜ್ಞ. ಸಂಭಾವನೆಯ ವಿಷಯದಲ್ಲಾಗಲೀ, ಪಾತ್ರದ ವಿಷಯದಲ್ಲಾಗಲೀ ದೇವರಾಜ್‌ ಕಿರಿಕಿರಿ ಮಾಡಿದರು ಎಂಬ ಒಂದೇ ಒಂದು ವಿವಾದವೂ ಅವರ ಕುರಿತು ಹೊರಹೊಮ್ಮಿಲ್ಲ.

ಸಿಗುತ್ತಿದ್ದ ಸಂಭಾವನೆಯನ್ನೇ ಜೋಪಾನವಾಗಿಸಿ, ಪೈಸೆಗೆ ಪೈಸೆ ಸೇರಿಸಿ ನಗರದ ಹೊರವಲಯದಲ್ಲಿ ಮನೆಯನ್ನು ಕಟ್ಟಿಸಿರುವ ದೇವರಾಜ್‌ ಅದನ್ನು ಆಗೊಮ್ಮೆ ಈಗೊಮ್ಮೆ ಕಿರುತೆರೆ ಧಾರಾವಾಹಿ ಮತ್ತು ಚಲನಚಿತ್ರಗಳ ಚಿತ್ರೀಕರಣಕ್ಕೆ ಬಿಟ್ಟುಕೊಡುವುದೂ ಇದೆ.

ಈಗ ಆಯ್ದ ಚಿತ್ರಗಳಲ್ಲಷ್ಟೇ ನಟಿಸುತ್ತಿರುವ ದೇವರಾಜ್‌ ತಮ್ಮ ಮಗ ಪ್ರಜ್ವಲ್‌ ದೇವರಾಜ್‌ ಭವಿಷ್ಯವನ್ನು ರೂಪಿಸುವುದರ ಕಡೆಗೆ ಗಮನ ಹರಿಸಿದ್ದಾರೆ. ಅವರ ಪತ್ನಿ ಚಂದ್ರಲೇಖಾ ಕೂಡಾ ಕಲಾವಿದೆಯೇ. ತುಂಬಿದ ಸಂಸಾರವೊಂದಿಗರಾದ ಸಹೃದಯಿ ದೇವರಾಜ್‌ರವರಿಗೆ ಶುಭ ಹಾರೈಸೋಣ.

No comments:

Post a Comment