Translate in your Language

Tuesday, September 2, 2014

ನಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರಿಗೆ ೪೧ನೇ ಹುಟ್ಟುಹಬ್ಬದ ಶುಭಾಶಯಗಳು


ಬಿಗ್-ಭಾಸ್ ಕಿಚ್ಚ  ಸುದೀಪ್ ಅವರು ಸದಾ ಚಿಲುಮೆಯ ಬುಗ್ಗೆಯಂತೆ ಚಿಮ್ಮುತ್ತಾ   & ಅವರ ಸ್ಟಾರ್-ಗಿರಿ ಸದಾ ದೇಶಾದ್ಯಂತ ಮಿನುಗುತ್ತಿರಲಿ ಎಂದು ಹಾರೈಸೋಣ




ಕಿಚ್ಚ ಸುದೀಪ್ ಕುರಿತ ಕೆಲವು ಕುತೂಹಲಕರ ಸಂಗತಿಗಳು
ಕನ್ನಡದ ಕಿಚ್ಚ-ಹುಚ್ಚ-ಪಾರ್ಥ-ಚಂದು-ವಾಲಿ-ವೀರಮದಕರಿ-ಕೆಂಪೇಗೌಡ-ವಿಷ್ಣುವರ್ಧನ
ಕನ್ನಡದ ಮೋಸ್ಟ್ ಸೇಲಬಲ್ ಸ್ಟಾರ್ ಸುದೀಪ್ ಅವರಿಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೈಕಟ್ಟನ್ನು ತುಂಬ ಜತನದಿಂದ ಕಾಪಾಡಿಕೊಂಡು ಬಂದಿರುವ ಸುದೀಪ್ ಅವರಿಗೆ 41 ಎಂದರೆ ಯಾರೂ ನಂಬಲ್ಲ. ಅವರ ಜೀವನೋತ್ಸಾಹ, ನೇರ ಮಾತುಗಳು ಎಂತಹವರನ್ನು ಬೆರಗಾಗಿಸುತ್ತವೆ.

With his Daughter


ನಟ, ನಿರ್ದೇಶಕ, ರಿಯಾಲಿಟಿ ಶೋಗಳ ನಿರೂಪಕರಾಗಿ, ಗಾಯಕರಾಗಿ ಸುದೀಪ್ ಅವರು ತಮ್ಮದೇ ಆದಂತಹ ಛಾಪನ್ನು ಮೂಡಿಸಿದವರು. ನಂಬರ್ 359, 17ನೇ ಎ ಕ್ರಾಸ್, 26ನೇ ಮುಖ್ಯರಸ್ತೆ, ಜೆಪಿ ನಗರ, ಬೆಂಗಳೂರು-78 ವಿಳಾಸದಲ್ಲಿ ಇಂದು ಕಿಚ್ಚೋತ್ಸವ. ಅಭಿಮಾನಿಗಳು ಸಾಲುಗಟ್ಟಿ ತಮ್ಮ ನೆಚ್ಚಿನ ಕಿಚ್ಚನಿಗೆ ಪ್ರೀತಿಯ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. [ಸುದೀಪ್ ಕನ್ನಡದ ಗಾಡ್ ಫಾದರ್ ಆದ ವರ್ಷವಿದು]

'ಅಖಿಲ ಕರ್ನಾಟಕ ಸುದೀಪ್ ಅಭಿಮಾನಿಗಳ ಸಂಘ' ಕಿಚ್ಚೋತ್ಸವ ಹಮ್ಮಿಕೊಂಡಿದ್ದು ಜೆಪಿ ನಗದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಸಮಾಜಕ್ಕೆ ಒಳಿತಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಬೆಳಗ್ಗೆ 9.30ರಿಂದ ಸಂಜೆ 4.00 ಗಂಟೆಯವರೆಗೆ 'ಕಿಚ್ಚೋತ್ಸವ' ನಡೆಯಲಿದೆ.

ಕನ್ನಡದ ರನ್ನ (ತೆಲುಗಿನ ಅತ್ತಾರಿಂಟಿಕಿ ದಾರೇದಿ ರೀಮೇಕ್), ಹೆಬ್ಬುಲಿ, ತಮಿಳಿನ ಚಿಂಬುದೇವನ್ ಚಿತ್ರ, ಸೂರಪ್ಪ ಬಾಬು ಹಾಗೂ ರಘುನಾಥ್ ಅವರ ಚಿತ್ರಗಳು ಸದ್ಯಕ್ಕೆ ಸುದೀಪ್ ಅವರ ಕೈಯಲ್ಲಿರುವ ಚಿತ್ರಗಳು. ಇದೇ ಸಂದರ್ಭದಲ್ಲಿ ಕಿಚ್ಚನ ಕುರಿತ ಕೆಲವು ಆಸಕ್ತಿಕರ ಸಂಗತಿಗಳನ್ನು ನೋಡೋಣ ಬನ್ನಿ.
ಸುದೀಪ್ ಹವ್ಯಾಸಗಳಲ್ಲಿ ಹಾಡುಗಾರಿಕೆ
Mr & Mrs Sudeep

"ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ" ಎಂದು 'ಚಂದು' (2002) ಚಿತ್ರದಲ್ಲಿ ಹಾಡಿ ಎಲ್ಲರನ್ನೂ ಚಕಿತಗೊಳಿಸಿದ್ದರು. ಅವರಲ್ಲೂ ಒಂದು ಹಾಡುಹಕ್ಕಿ ಅಡಗಿದೆ ಎಂಬುದು ಗೊತ್ತಾಗಿದ್ದೇ ಆಗ. ಸುದೀಪ್ ಅವರ ಹವ್ಯಾಸಗಳಲ್ಲಿ ಹಾಡುಗಾರಿಕೆಯೂ ಒಂದು. ಜೊತೆಗೆ ಪುಸ್ತಕ ಓದುವ ಗೀಳು, ಕಥೆ ಹೆಣೆಯುವ ಹುಮ್ಮಸ್ಸು ಇದೆ.

ಅವರ ಹಿಂದಿಯ ಫೂಂಕ್-೧, ೨, ರಣ್, ತೆಲುಗಿನ "ಈಗ" ಚಿತ್ರದ ಅದ್ಭುತ ನಟನೆ ಅವರನ್ನು ದೇಶದ ಅತೀ ಬೇಡಿಕೆಯ ನಟ ನನ್ನಾಗಿ ಮಾಡಿವೆ
ಅವರ ಬಿಗ್-ಬಾಸ್ ಸೀಸನ್ ೧ ಮತ್ತು ೨ ರ ಅದ್ಭುತ ಯಶಸ್ಸು ಅವರನ್ನು ಕಿರುತೆರೆಯ ಅತ್ಯಂತ ಯಶಸ್ವಿ  ನಿರೂಪಕ ನೆಂದು ಹೇಳಬಹುದು
ಅವರ CCL ಕ್ರಿಕೆಟ್ ಸಾಧನೆ ಕೂಡ ಅಪಾರ,  CCL ನಲ್ಲಿ ಕರ್ನಾಟಕ ಬುಲ್ಡೋಜರರ್ಸ್ CCL ಚಾಂಪಿಯನ್  ಟ್ರೋಫಿ   ಪಡೆದಿದ್ದು ಕೂಡ  ಅವರ ನೇತ್ರುತ್ವದಲ್ಲಿಯೇ


No comments:

Post a Comment