Translate in your Language

Wednesday, September 17, 2014

ಪಂಡಿತ್ ಪುಟ್ಟರಾಜ ಗವಾಯಿ ಯವರು ನಮ್ಮನ್ನಗಲಿ ಇಂದಿಗೆ ೪ ವರ್ಷಗಳು ಕಳೆದವು,

ಪಂಡಿತ್ ಪುಟ್ಟರಾಜ ಗವಾಯಿ ಯವರು ನಮ್ಮನ್ನಗಲಿ ಇಂದಿಗೆ ೪ ವರ್ಷಗಳು ಕಳೆದವು, ಆದರೆ ಅವರ ಸಾಧನೆ ಮಾತ್ರ ಎಲ್ಲಾ ಕಾಲಕ್ಕೂ ಅಮರ, ಅದಮ್ಯ ಚೇತನಕ್ಕೆ ನಮ್ಮ ನಮನ 
 ಪಂಡಿತ್ ಪುಟ್ಟರಾಜ ಗವಾಯಿ (3 March 1914 – 17 September 2010) ಅವರ ಸಾಧನೆಗಳ ಒಂದು ಕಿರು ಪರಿಚಯ

ಡಾ.ಪಂ.ಪುಟ್ಟಾರಾಜ ಕವಿ ಗವಾಯಿಗಳಾವರು ಹುಟ್ಟಿದ್ದು ತಮ್ಮ ತಾಯಿಯ ತವರೂರಾದ 'ದೇವಗಿರಿಯಲ್ಲಿ ದಿನಾಂಕ ೧೯೧೪ ಮಾರ್ಚ ೩.ರಂದು ಇವರ ಮೂಲಊರುವೆಂಕಟಾಪುರ.ವೆಂಕಟಾಪುರದಲ್ಲಿ ಇವರು ಹಿರೇಮಠದವರು.ವೆಂಕಟಾಪುರದ ಹಿರೇಮಠದ ಶಾಖಾ ಮಠ ಹಾನಗಲ್ಲ ತಾಲೂಕಿನ ದೇವರ ಹೊಸಪೇಟಿಯಲ್ಲಿ ಇತ್ತು.ಇವರ ಪೂರ್ವಿಕರು ಈ ಹೊಸಪೇಟೆಗೆ ಹೋಗಿ ಬಂದು ಅಲ್ಲಿನ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಪಂಚಾಕ್ಷರಿ ಗವಾಯಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು?

ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತವಾದ್ಯಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವುಗಲನ್ನೂ ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೆ, ಪುಟ್ಟರಾಜರು ತಬಲಾ,ಹಾರ್ಮೋನಿಯಮ್,ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣತರಾದರು. ಪೀಠಾಧಿಪತಿ ಕೇವಲ ೮ ವರ್ಷದ ಬಾಲಕರಾಗಿದ್ದಾಗ ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಆಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು ಗುರುಗಳ ಆಶೀರ್ವಾದ, ನಿಷ್ಠೆ-ವಿಶ್ವಾಸ, ಸ್ವತ್ಛಂದ ಮನಸ್ಸಿನೊಂದಿಗೆ ಆಶ್ರಮದ ಪೀಠಾಧಿಪತಿ ಸ್ಥಾನಕ್ಕೇರಿದರು. ೧೯೪೪ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಭಾರ ಹೊತ್ತ ಪುಟ್ಟರಾಜ ಗವಾಯಿ ಅವರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಆಶ್ರಮದ ಅಭಿವೃದ್ಧಿ, ಅಂಧ-ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡರು. 

'ಕಾಯಕವೇ ಕೈಲಾಸವಯ್ಯ' ಎಂಬ ಶರಣರ ವಾಣಿಯನ್ನು ಅಕ್ಷರಶಃ ಅನುಷ್ಠಾನಗೊಳಿಸಿದರು. ದಿನಚರಿ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಿತ್ಯಕರ್ಮ ಹಾಗೂ ಯೋಗದ ಅನಂತರ ಬಾವಿ ನೀರಿನ ಮಜ್ಜನದೊಂದಿಗೆ ಮಡಿಯಾಗಿ ಪೂಜಾ ಕೋಣೆ ಸೇರಿದರೆ ಸಾಕು ಹೊರಗಿನ ಜಗತ್ತನ್ನೆ ಮರೆಯುತ್ತಿದ್ದರು. ಪೂಜಾ ಕೋಣೆಯಲ್ಲಿ ತ್ರಿಕಾಲ ನಿಷ್ಠರಾಗಿ ನಾಲ್ಕೈದು ಗಂಟೆಗಳವರೆಗೆ ಆರಾಧ್ಯದೈವದಲ್ಲಿ ತನ್ಮಯರಾಗಿ ಪುಟ್ಟರಾಜರು ಕೈಗೊಳ್ಳುತ್ತಿದ್ದ ಇಷ್ಟಲಿಂಗ ಅರ್ಚನೆ. ಇಷ್ಟಲಿಂಗ ಪೂಜೆಯನ್ನು ದಿನದಲ್ಲಿ ಎರಡು ಬಾರಿ ಮಾಡುತ್ತಿದ್ದರು.ಪುಟ್ಟರಾಜರು ಇಷ್ಟಲಿಂಗ ಪೂಜೆ ವಿಷಯದಲ್ಲಿಯೂ ಅಷ್ಟೇ ಖ್ಯಾತರಾಗಿದ್ದರು. ಮಕ್ಕಳಿಗೆ ಪಾಠ , ಇತರರಿಗೆ ಹೇಳಿ ಪುರಾಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ. ಆಶ್ರಮದ ಮಕ್ಕಳ ಆಟ-ಊಟ-ಉಪಚಾರ ಹಾಗೂ ಅನಾರೋಗ್ಯ ಕಾಡಿದರೆ ಮಕ್ಕಳ ದೇಖ್ ರೇಖ್. 

ಇಷ್ಟಲಿಂಗ ಪೂಜೆ 
ವೀರೇಶ್ವರ ಪುಣ್ಯಾಶ್ರಮದಲ್ಲಿ ಪುಟ್ಟರಾಜ ಗವಾಯಿಗಳು ಪೂಜಾಕಾರ್ಯ ವಿಭೂತಿ, ಗಂಧ, , ಪುಷ್ಪ, ಬಿಲ್ವಪತ್ರಿ,ಬೆಳ್ಳಿಯ ಬೋಗಾಣಿ, ಕರ್ಪೂರ, ರುದ್ರಾಕ್ಷಿ ಮಾಲೆ-ಕಿರೀಟ, ಊದುಬತ್ತಿ, ಪಂಚಾಮೃತ, ಜೋಡು ಗಂಟೆಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗುತ್ತಿತ್ತು. ಪದ್ಮಾಸನದಲ್ಲಿನ ಗುರುಗಳ ಮಂತ್ರ ಪಠನ, ಜೋಡುಗಂಟೆಯ ಪೂಜಾಕಾರ್ಯ ನೋಡುವುದೇ ಒಂದು ಭಾಗ್ಯವಾಗಿತ್ತು. ನಿತ್ಯವೂ ಮೂರು ಸಲ ಸುಮಾರು ೪ರಿಂದ ೫ ತಾಸು ರುದ್ರಾಭಿಷೇಕ, ಜಪದೊಂದಿಗೆ ಪೂಜೆ ಮಾಡುತ್ತಿದ್ದ ಪುಟ್ಟರಾಜ ಗವಾಯಿ ಅನಂತರ ಪ್ರಸಾದ ಸೇವಿಸಿ ಹೊರಬರುತ್ತಿದ್ದರು. ಸಂಗೀತ ರಿಯಾಜ್ ಮತ್ತು ಪಾಠ ಬೆಳಿಗ್ಗೆ ೪ ಗಂಟೇಕ ಎದ್ದು ಪಂಚಾಕ್ಷರಿ ಗವಾಯಿಗಳನ್ನು ನೆನೆಸಿ ರಿಯಾಜ್ ಮಾಡುವದು. ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಸಂಗೀತಗದ ಪಾಠ.  ಪುಟ್ಟರಾಜ ಗವಾಯಿಗಳ ಕೊಡುಗೆ ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪುಟ್ಟರಾಜ ಗವಾಯಿಗಳು ಸಂಗೀತಾಭ್ಯಾಸ ನೀಡುತ್ತಿದ್ದರು. 

ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಯಿಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. 

ಇಷ್ಟನ್ನೇ ಸಾಧಿಸಿದ್ದರೆ ಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಠೆಯಿಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಯೂ ಪಾಲಿಸಿಕೊಂಡು ಸ್ವತಃ ದೇವರಾದರು.  ಆಡಳಿತದ ಮೇಲುಸ್ತುವಾರಿ ಆಶ್ರಮದ ದೈನಂದಿನ ಖರ್ಚು-ವೆಚ್ಚ ಸರಿದೂಗಿಸಲು ಹಾನಗಲ್ ಕುಮಾರಸ್ವಾಮಿಗಳು ತಮ್ಮ ಗುರುಗಳಿಗೆ ನೀಡಿದ್ದ ಜೋಳಿಗೆ ಹೆಗಲಿಗೇರಿಸಿ ಊರೂರು ಸಂಚಾರ, ನಿರಂತರ ಪ್ರವಾಸ ಪುಟ್ಟಯ್ಯಜ್ಜನವರ ಬದುಕಾಗಿತ್ತು. ೯೭ ವರ್ಷದ ವಯೋಸಹಜ ಕಾಯಿಲೆಗಳಿಂದ ಅವರು ಬಳಲಿದರೂ ಈ ನಡಾವಳಿಗೆ ಯಾವತ್ತೂ ಚ್ಯುತಿ ಬರಲಿಲ್ಲ. 

ಗುರು ಪಂಚಾಕ್ಷರಿ ನೀಡಿದ ಮಾರ್ಗ ದಂಡ ಯಾವತ್ತೂ ಕೈಯಲ್ಲಿ ಹಿಡಿದು ಪುಟ್ಟಯ್ಯಜ್ಜ ನಡೆದರೆ ‘ನಡೆದಾಡುವ ದೇವರು’ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಕಾಣುತ್ತಿರಲಿಲ್ಲ.

ಪುಟ್ಟರಾಜ ಗವಾಯಿ ಅವರ ೧೦೧ ನೆ ಹುಟ್ಟು. ಹಬ್ಬದ ಸವಿ ನೆನಪಿನಲ್ಲಿ
ಮುಗಿಲು ಮುಟ್ಟಿದ ಪುಟ್ಟಜ್ಜಯ್ಯ ಶಿಷ್ಯರ ಆಕ್ರಂದನ

No comments:

Post a Comment