(September 8, 1938 – April 5, 2007)
ಕನ್ನಡ ಸಾಹಿತ್ಯ ಹಾಗೂ ಆಡಿಯೋ ಮಾರುಕಟ್ಟೆ ಕ್ಷೇತ್ರದಲ್ಲೇ ವಿನೂತನ ಪ್ರಯೋಗವಾದ 'ಕೇಳಿ ಕಥೆಯ' ಆಡಿಯೋ ಪುಸ್ತಕವು ಜನಮನಗೆದ್ದ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಮುನ್ನಾ ದಿನ ಲೋಕಾರ್ಪಣೆಗೊಳ್ಳುತ್ತಿದೆ. ಅಂದು ಸಂಜೆ ಅವಿರತ ಪ್ರತಿಷ್ಠಾನ ವಿಶಿಷ್ಟವಾಗಿ ತೇಜಸ್ವಿ ಅವರ ಹುಟ್ಟುಹಬ್ಬ ಆಚರಿಸುತ್ತಿದೆ. ಕೇಳಿಕಥೆಯ ಇನ್ನೂ ಬಿಡುಗಡೆ ಏಕೆ ಆಗಿಲ್ಲ ಎಂದು ಜನ ಕೇಳುವ ಪ್ರಶ್ನೆಗೆ ವಿಡಿಯೋ ರೂಪದಲ್ಲಿ ಕೇಳಿಕಥೆಯ ತಂಡ ಉತ್ತರ ನೀಡಿದೆ ಇದೇ ಸೆಪ್ಟೆಂಬರ್ 07 ರಂದು ಗಡಿನಾಡ ಕನ್ನಡ ಮಕ್ಕಳ ಪುಟಾಣಿ ಕೈಗಳಿಂದ ಹೊರಬರಲಿದೆ "ಕೇಳಿ ಕಥೆಯ" ಜೊತೆಗೆ, ಕನ್ನಡದ ಮೌಖಿಕ ಕಥನ ಪರಂಪರೆಯ ನೇರ ಪ್ರಾತ್ಯಕ್ಷಿಕೆ ಹರಿಕಥೆ, ಕಂಸಾಲೆ ಮತ್ತು ನೀಲಗಾರರ ಪದಗಳ ಪಲುಕುಗಳು.
ನಮ್ಮೆಲ್ಲರ ಪ್ರೀತಿಯ ತೇಜಸ್ವಿಯಿಂದ, ಯುವ ಲೇಖಕ ವಿಕ್ರಮ್ ಹತ್ವಾರ್ ನ ಕತೆಯೂ ಸೇರಿದಂತೆ ಇದರಲ್ಲಿ ಆರು ಕತೆಗಳಿವೆ. ಹಿರಿಯ ನಿರ್ದೇಶಕ ನಾಗಾಭರಣ ರಿಂದ ರಕ್ಷಿತ್ ಶೆಟ್ಟಿಯ ತನಕ ಆರು ವಿಶಿಷ್ಠ ದನಿಗಳು ಈ ಕತೆಗಳನ್ನ ಓದಿವೆ.ಈ ಆಡಿಯೋ ಸಿಡಿ ಯಿಂದ ಬರುವ ಸಂಪೂರ್ಣ ಲಾಭ ಅವಿರತ ಪ್ರತಿಷ್ಠಾನದ ಮೂಲಕ ಗಡಿನಾಡ ಕನ್ನಡ ಮಕ್ಕಳ ಶಿಕ್ಷಣಕ್ಕೆ ಮೀಸಲು.
ತೇಜಸ್ವಿ ನೆನಪಿನ 'ಮಾಯಾಲೋಕ - ತೇಜಸ್ವಿ ಹಾದಿಯಲ್ಲೊಂದು ಪಯಣ' ಕಾರ್ಯಕ್ರಮ(ಸೆ.7) ಸರಣಿಯ ಎರಡನೇ ಹಾಗೂ ಕೊನೆಯ ದಿನದ ಕಾರ್ಯಕ್ರಮ ಸೆಪ್ಟೆಂಬರ್ 14 ರಂದು "ತೇಜಸ್ವಿ ಸಾಹಿತ್ಯ - ಕಾಲುದಾರಿಯ ನೋಟ". ಈ ಕಾರ್ಯಕ್ರಮವು ಒಂದು ಸಾಹಿತ್ಯ ಮಂಟಪವಾಗಿದ್ದು, ಇಲ್ಲಿ ಶಿಬಿರಾರ್ಥಿಗಳು ಮುಖ್ಯ ಭೂಮಿಕೆಯನ್ನು ವಹಿಸಬೇಕಾಗುತ್ತೆ. ಶಿಬಿರಾರ್ಥಿ ತಮ್ಮ ಹೆಸರು, ವಿದ್ಯಾಭ್ಯಾಸ , ವೃತ್ತಿಯ ವಿವರಗಳ ಜೊತೆಗೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಈ ಕೆಳಕಂಡ ಈ-ಮೈಲ್ ವಿಳಾಸಗಳಿಗೆ ಕಳುಹಿಸಬೇಕಾಗಿ ವಿನಂತಿಸುತ್ತೇವೆ
No comments:
Post a Comment