![]() |
| ಜಿ.ಪಿ.ರಾಜರತ್ನಂ |
ಜಿ.ಪಿ.ರಾಜರತ್ನಂರವರು 1908ರ ಡಿಸೆಂಬರ್ 5 ರಂದು ರಾಮನಗರದಲ್ಲಿ ಜನಿಸಿದರು. ತಂದೆ ಜಿ.ಕೆ. ಗೋಪಾಲಕೃಷ್ಣ ಅಯ್ಯಂಗಾರ್. ೧೯೨೮ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ; ೧೯೩೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ ಪಡೆದರು. ಮಹಾರಾಜ ಕಾಲೇಜಿನಲ್ಲಿ ಕೆಲವು ಕಾಲ ಅಧ್ಯಾಪಕರಾಗಿದ್ದರು. ಆರಂಭದಲ್ಲಿ ಇವರು ಶಿಶುವಿಹಾರ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಕೆಲಸ ಮಾಡಿದರು. ಅನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಇಲಾಖೆಯಲ್ಲಿ ಇವರಿಗೊಂದು ಪಂಡಿತ ಹುದ್ದೆ ದೊರೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ಮುಂದೆ ಕನ್ನಡ ಉಪಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ೧೯೬೪ರಲ್ಲಿ ನಿವೃತ್ತರಾದರು.






